ಶಿಕಾರಿಪುರ ಪ್ರತಿಷ್ಠಿತ ಹಿರಿಯ ಸದಸ್ಯರು ಸೇರಿ 1956 ಅಕ್ಟೋಬರ್ 21ರಂದು ಪೌರರು ಸೇರಿ ಪೌರ ವಿಹಾರ ಪ್ರಾರಂಭಿಸಿದರು. ಇದಕ್ಕೆ K .V. ನರಸಪ್ಪನವರು ಜಾಗವನ್ನು ಸಂಸ್ಥಾಪಕರು ಹಾಗೂ ದಾನವಾಗಿ ನೀಡಿದ್ದರು ಹಾಗೂ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇಂತಹ ಮಹಾದಾನಿಗಳಾದ ಶ್ರೀ K. V. ನರಸಪ್ಪ , ಶ್ರೀ ಹೊನ್ನ ಶೆಟ್ಟರು ಮಹಾದೇವಪ್ಪ, ಶ್ರೀ ಮಾನ್ ಸದಾಶಿವಶಾಸ್ತ್ರಿ , ಶ್ರೀ ಮಾನ್ ರುದ್ರಪ್ಪಶಾಸ್ತ್ರಿ, ಶ್ರೀಮಾನ್ ಎಸ್ ಶಂಕ್ರಪ್ಪನವರು ಇಂತಹ ಮಹಾದಾನಿಗಳನ್ನು ಸಂದರ್ಭದಲ್ಲಿ ಸ್ಮರಿಸುತ್ತ ಇಂದಿನ ದಿನ ಪ್ರಾಸ್ತಾವಿಕ ನುಡಿಯನ್ನು ಪ್ರಾರಂಭಿಸುತ್ತಿದ್ದೇನೆ.
ಪೌರ ವಿಹಾರವು 1956 ಅಕ್ಟೋಬರ್ 21ರಂದು ಪ್ರಾರಂಭಗೊಂಡಿದ್ದು ಇಂದಿಗೆ 68 ವರ್ಷಗಳತ್ತ ಸಾಗುತ್ತಿದೆ. ಈಗಿರುವ ಕಟ್ಟಡದ ಹಾಗೂ ಒಟ್ಟು ಜಾಗ 4-35 ಜಮೀನನ್ನು 1979ರಲ್ಲಿ ಅಂದಿನ ಅಧ್ಯಕ್ಷರಾದ H ಮಹಲಿಂಗಪ್ಪನವರು ಕೇವಲ 30,000/- ರೂಗಳಿಗೆ ಖರೀದಿಸಿ ಸಂಸ್ಥೆಗೆ ನೀಡಿದ್ದಾರೆ. ಅಂದಿನಿಂದ ಪೌರವವಿಹಾರದ ವತಿಯಿಂದ ಹಲವಾರು ಕ್ರೀಡೆಗಳನ್ನು ನಡೆಸುತ್ತಾ ಹಾಗೂ ಧನ ಸಹಾಯವನ್ನು ಮಾಡುತ್ತ ಬಂದಿರುತ್ತದೆ. ಸದಸ್ಯರಿಗೆ ಮನೋರಂಜನೆಗಾಗಿ ಪ್ರವಾಸವನ್ನು ಅಂದಿನಿಂದ ಇಂದಿನವರೆಗೂ ಮುಂದುವರೆಸುತ್ತ ಬಂದಿರುತ್ತದೆ ಹಾಗೂ ಪೌರ ವಿಹಾರ ವತಿಯಿಂದ ಅನೇಕ ಆರೋಗ್ಯ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರುತ್ತದೆ.
ಶಿಕಾರಿಪುರಕ್ಕೆ ಕೋರ್ಟ್ ಬಂದಾಗ ಪೌರ ವೀಹಾರ ಇದ್ದ ಜಾಗವನ್ನು 13 - 06 - 1971 ರಲ್ಲಿ ಕೋರ್ಟಿಗೆ ಜಾಗವನ್ನು ಬಿಟ್ಟುಕೊಟ್ಟು ಶಿಕಾರಿಪುರಕ್ಕೆ ಕೋರ್ಟ್ ಬರಲು ಪೌರ ವಿಹಾರವು ಕಾರಣಿಭೂತವಾಗಿರುತ್ತದೆ
1981 ರಲ್ಲಿ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಮೆಂಟ್ ನಡೆಸಲಾಯಿತು. 1981 ರಲ್ಲಿ ಶಿಕಾರಿಪುರದ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ಕಟ್ಟಲು ಪೌರ ವಿಹಾರ ವತಿಯಿಂದ 20000/- ರೂ ಗಳನ್ನು 22- 1- 1981 ರಲ್ಲಿ ನೀಡಲಾಯಿತು.
2022 - 23ನೇ ಅಂತ್ಯಕ್ಕೆ ಒಟ್ಟು 216 ಜನ ಸದಸ್ಯರನ್ನ ಹೊಂದಿದೆ. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ. 2013 ರಲ್ಲಿ ಬಾರ್ ತರಲು ಕಾರಣಭೂತರಾದ T . S ಮಹಾಲಿಂಗಪ್ಪ ಡಿ. ಲೋಕೇಶಪ್ಪ V. ಶ್ರೀಧರ ಕೀರ್ತಿ S . P ನಾಗರಾಜ್ ಗೌಡ T. M ಶ್ರೀಧರ ಇವರ ಪಾತ್ರ ಮುಖ್ಯವಾದದ್ದು.