• ಸ್ಥಳಎಸ್.ಎಸ್.ರಸ್ತೆ, ಶಿಕಾರಿಪುರ , ಶಿವಮೊಗ್ಗ ಜಿಲ್ಲೆ - 577427

  • ಇಮೇಲ್Info@pouravihara.com

  • ಸಂಪರ್ಕಿಸಿ +91 99016 33265

ಪೌರ ವಿಹಾರವು 1956 ಅಕ್ಟೋಬರ್ 21ರಂದು ಪ್ರಾರಂಭಗೊಂಡಿದ್ದು ಇಂದಿಗೆ 68 ವರ್ಷಗಳತ್ತ ಸಾಗುತ್ತಿದೆ

ಶಿಕಾರಿಪುರ ಪ್ರತಿಷ್ಠಿತ ಹಿರಿಯ ಸದಸ್ಯರು ಸೇರಿ 1956 ಅಕ್ಟೋಬರ್ 21ರಂದು ಪೌರರು ಸೇರಿ ಪೌರ ವಿಹಾರ ಪ್ರಾರಂಭಿಸಿದರು. ಇದಕ್ಕೆ K .V. ನರಸಪ್ಪನವರು ಜಾಗವನ್ನು ಸಂಸ್ಥಾಪಕರು ಹಾಗೂ ದಾನವಾಗಿ ನೀಡಿದ್ದರು ಹಾಗೂ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇಂತಹ ಮಹಾದಾನಿಗಳಾದ ಶ್ರೀ K. V. ನರಸಪ್ಪ , ಶ್ರೀ ಹೊನ್ನ ಶೆಟ್ಟರು ಮಹಾದೇವಪ್ಪ, ಶ್ರೀ ಮಾನ್ ಸದಾಶಿವಶಾಸ್ತ್ರಿ , ಶ್ರೀ ಮಾನ್ ರುದ್ರಪ್ಪಶಾಸ್ತ್ರಿ, ಶ್ರೀಮಾನ್ ಎಸ್ ಶಂಕ್ರಪ್ಪನವರು ಇಂತಹ ಮಹಾದಾನಿಗಳನ್ನು ಸಂದರ್ಭದಲ್ಲಿ ಸ್ಮರಿಸುತ್ತ ಇಂದಿನ ದಿನ ಪ್ರಾಸ್ತಾವಿಕ ನುಡಿಯನ್ನು ಪ್ರಾರಂಭಿಸುತ್ತಿದ್ದೇನೆ.

ಪೌರ ವಿಹಾರವು 1956 ಅಕ್ಟೋಬರ್ 21ರಂದು ಪ್ರಾರಂಭಗೊಂಡಿದ್ದು ಇಂದಿಗೆ 68 ವರ್ಷಗಳತ್ತ ಸಾಗುತ್ತಿದೆ. ಈಗಿರುವ ಕಟ್ಟಡದ ಹಾಗೂ ಒಟ್ಟು ಜಾಗ 4-35 ಜಮೀನನ್ನು 1979ರಲ್ಲಿ ಅಂದಿನ ಅಧ್ಯಕ್ಷರಾದ H ಮಹಲಿಂಗಪ್ಪನವರು ಕೇವಲ 30,000/- ರೂಗಳಿಗೆ ಖರೀದಿಸಿ ಸಂಸ್ಥೆಗೆ ನೀಡಿದ್ದಾರೆ. ಅಂದಿನಿಂದ ಪೌರವವಿಹಾರದ ವತಿಯಿಂದ ಹಲವಾರು ಕ್ರೀಡೆಗಳನ್ನು ನಡೆಸುತ್ತಾ ಹಾಗೂ ಧನ ಸಹಾಯವನ್ನು ಮಾಡುತ್ತ ಬಂದಿರುತ್ತದೆ. ಸದಸ್ಯರಿಗೆ ಮನೋರಂಜನೆಗಾಗಿ ಪ್ರವಾಸವನ್ನು ಅಂದಿನಿಂದ ಇಂದಿನವರೆಗೂ ಮುಂದುವರೆಸುತ್ತ ಬಂದಿರುತ್ತದೆ ಹಾಗೂ ಪೌರ ವಿಹಾರ ವತಿಯಿಂದ ಅನೇಕ ಆರೋಗ್ಯ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿರುತ್ತದೆ.

ಮತ್ತಷ್ಟು ಓದು

ನಮ್ಮ ವ್ಯವಸ್ಥಾಪಕ ಸಮಿತಿ

ನಮ್ಮ ಮುಂಬರುವ ಕಾರ್ಯಕ್ರಮಗಳು

ಉತ್ಸಾಹಭರಿತ ಸಮುದಾಯ ಕೂಟಗಳಿಂದ ಹರ್ಷದಾಯಕ ಕ್ರೀಡಾ ಸ್ಪರ್ಧೆಗಳವರೆಗೆ, ನಮ್ಮ ಕ್ಯಾಲೆಂಡರ್ ಪ್ರತಿ ಆಸಕ್ತಿಯನ್ನು ಪೂರೈಸುವ ವೈವಿಧ್ಯಮಯ ಚಟುವಟಿಕೆಗಳಿಂದ ತುಂಬಿರುತ್ತದೆ. ಸ್ಮರಣೀಯ ಕ್ಷಣಗಳಿಗಾಗಿ ನಮ್ಮೊಂದಿಗೆ ಸೇರಿ, ಹೊಸ ಸಂಪರ್ಕಗಳನ್ನು ಬೆಸೆಯಿರಿ ಮತ್ತು ನಮ್ಮ ಮುಂಬರುವ ಈವೆಂಟ್‌ಗಳ ರೋಮಾಂಚಕ ಶಕ್ತಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ಚಿತ್ರ ಸಂಪುಟ